Sunday, February 8, 2015

ವಿಪತ್ತು ನಿರ್ವಹಣೆಗೆ ಕಂಟ್ರೋಲ್‌ ರೂಂ :: State Disaster Response Center:: NDRD 2015 : udayavani

ಉದಯವಾಣಿ, February 07, 2015
ಬೆಂಗಳೂರು: ರಾಜ್ಯದಲ್ಲಿ ಸಂಭವಿಸುವ ವಿಪತ್ತುಗಳ ತ್ವರಿತ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ "ರಾಜ್ಯ ವಿಪತ್ತು ಸ್ಪಂದನಾ ಕೇಂದ್ರ ಮತ್ತು ನಾಗರಿಕ ರಕ್ಷಣಾ ನಿಯಂತ್ರಣ ಕೊಠಡಿ' ಸ್ಥಾಪಿಸಲಾಗುವುದು ಎಂದು ಗೃಹ ರಕ್ಷಕ ದಳದ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಹೇಳಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗೃಹರಕ್ಷಕ, ಪೌರರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯ ಶುಕ್ರವಾರ ಹಮ್ಮಿಕೊಂಡಿದ್ದ "ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಮತ್ತು ರ್ಯಾಲಿ'ಯಲ್ಲಿ ಪಾಲ್ಗೊಂಡ ನಂತರ "ಉದಯವಾಣಿ'ಯೊಂದಿಗೆ ಅವರು ಮಾತನಾಡಿದರು.

ಈ ನೂತನ ಯೋಜನೆಯಿಂದ ವಿಪತ್ತು ನಿರ್ವಹಣೆಯನ್ನು ಮತ್ತಷ್ಟು ತ್ವರಿತವಾಗಿ ನಿಭಾಯಿಸಬಹುದು. ಜತೆಗೆ ಸಾಕಷ್ಟು ಸಮಯ ಉಳಿತಾಯ ಆಗಲಿದೆ. ರಾಜ್ಯ ಪೊಲೀಸ್‌ ವಸತಿ ನಿಗಮ ಮತ್ತು ಕಿಯೋನಿಕ್ಸ್‌ ಸಹಯೋಗದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.

ಹೀಗೆ ಕೆಲಸ ಮಾಡುತ್ತೆ: ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ನಿಯಂತ್ರಣಾ ಕೊಠಡಿಗಳೊಂದಿಗೆ "ರಾಜ್ಯ ವಿಪತ್ತು ಸ್ಪಂದನಾ ಕೇಂದ್ರ ಮತ್ತು ನಾಗರಿಕ ರಕ್ಷಣಾ ನಿಯಂತ್ರಣ ಕೊಠಡಿ' ಅಡಿ ನೇರ ಸಂಪರ್ಕ ಸಾಧಿಸುವ ಸಮಗ್ರ ವ್ಯವಸ್ಥೆ ರೂಪಿಸಲಾಗುವುದು. ಆಯಾ ಜಿಲ್ಲಾ ವ್ಯಾಪ್ತಿಯ ವಿಪತ್ತು ನಿರ್ವಹಣೆಗೆ ತುರ್ತು ಉಪಕರಣಗಳ ಕುರಿತ ಪೂರಕ ಮಾಹಿತಿಯೂ ಈ ವ್ಯವಸ್ಥೆಯಲ್ಲಿರುತ್ತದೆ. ಇದರಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ವಿಪತ್ತು ಸಂಭವಿಸಿದರೆ ತಕ್ಷಣ ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ನಿಯಂತ್ರಣಾ ಕೊಠಡಿಗೆ ಸ್ವಯಂಚಾಲಿತವಾಗಿ ಮಾಹಿತಿ ರವಾನೆಯಾಗುತ್ತದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದು ವಿವರಿಸಿದರು.

ಉದಾಹರಣೆಗೆ ಜೆಸಿಬಿ, ಹಡಗು ಚಾಲಕ, ವಾಹನ ಚಾಲಕ, ಆ್ಯಂಬುಲೆನ್ಸ್‌, ಆಸ್ಪತ್ರೆ ಇಂತಹ ಹತ್ತಾರು "ದತ್ತಾಂಶ ಬ್ಯಾಂಕ್‌' ಈ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ ಎಂದ ಅವರು, ಚೀನಾದೊಂದಿಗಿನ ಯುದ್ಧದ ಸಂದರ್ಭದಲ್ಲಿ ಸ್ಥಾಪಿಸಿದ ಕೇಂದ್ರವೇ ಈವರೆಗೂ ನಮ್ಮಲ್ಲಿ ಇತ್ತು. ಇದನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನವೀಕರಿಸಲಾಗುತ್ತಿದೆ ಎಂದೂ ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ 1,614 ಬೆಂಕಿ ಅನಾಹುತ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ತಿಳಿಸಿದರು.

ದೇವರ ಕೆಲಸ- ರಾಜ್ಯಪಾಲ: ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ರಾಜ್ಯದ ವಿಪತ್ತು ನಿರ್ವಹಣಾ ತಂಡ ಕೇವಲ ಕರ್ನಾಟಕಕ್ಕೆ ಅಲ್ಲ, ದೇಶದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ಅವಘಢಗಳು ಸಂಭವಿಸಿದರೂ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ದೇವರ ಕೆಲಸವಾಗಿದ್ದು, ಅಪಾಯದಲ್ಲಿದ್ದವರನ್ನು ನೀವು ರಕ್ಷಿಸಿದರೆ, ನಿಮ್ಮನ್ನು ದೇವರು ರಕ್ಷಣೆ ಮಾಡುತ್ತಾನೆ ಎಂದು ಕಿವಿಮಾತು ಹೇಳಿದರು.

ಗೃಹ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರುಖುಮೊ ಪಚಾವೊ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಗಗನ್‌ದೀಪ್‌, ನಿವೃತ್ತ ಡಿಜಿಪಿ ಆರ್‌.ಎ.ಮುಂಡ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ಬಾಂಬ್‌ ಸ್ಫೋಟದ ಅಣುಕು ಪ್ರದರ್ಶನ ಗಮನ ಸೆಳೆಯಿತು. ಪೊಲೀಸರು, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ನಾಗರಿಕರ ಪಾತ್ರಗಳ ಬಗ್ಗೆ ತಿಳಿಸಿತು.

http://www.udayavani.com/kannada/news/29945/%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86%E0%B2%97%E0%B3%86-%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%E2%80%8C-%E0%B2%B0%E0%B3%82%E0%B2%82


Google Translate..
Bangalore: The quick management of disasters that occur in "Disaster Response Center and the state civil defense control room 'to be set up for the Home Guard Police said Om.

The Sree Kanteerava Stadium, home guards, pauraraksane, fire and emergency services organized by the Directorate on Friday "after attending the National Disaster Reduction Day and ryaliyalli" He spoke with udayavaniya.

This is a new project for disaster management is handled more quickly. Will be saving a lot of time with. Kiyoniks in collaboration with the State Police Housing Corporation and the undertaking of this project, the next three to four months of the coming into existence of the information.

Thus it is not working: In the future, all the DC's office, the police and fire brigade control rooms "with the State Disaster Response Center and the Civil Defence Control Room 'feet a direct connection comprehensive system designed. The respective district wide range of disaster management, emergency equipment on the supplementary information, the system will be. The state no corner of the disaster happens automatically as soon as the information is transported to the respective district and the police control room. This would save a lot of time.

For example inspecting the ship, the driver, the driver of the vehicle, ambulance, hospital, such as tens of millions "data bank" will be available in the system, he said, during the war with China since we were founded by the center. It was never updated with the most advanced technologies.

Prior to that he spent a year in the state Department of Fire and Emergency Services efficiently handled 1,614 cases of fire, he said.

God Working Governor: Governor vajubhayi Vala said, the state's disaster management team, not only in Karnataka, in any corner of the country to respond to natural disasters or man-made avaghadhagalu felt the need to develop as soon as they occur. This technical work of God, apayadalliddavarannu you save, you said, whispering that God does care.

Home Minister kejejarj said. Lal rukhumo pacavo State Police, the Home Ministry Secretary-trapped, retired Director General of Police were present aremundkar.

The fire and emergency services staff anuku performance caught the attention of the bombing. Police, Fire Department, Health Department and the citizens had about the characters.Read more athttp://www.udayavani.com/kannada/news/29945/%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86%E0%B2%97%E0%B3%86-%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%E2%80%8C-%E0%B2%B0%E0%B3%82%E0%B2%82#zGYs27OGXFtWqo2t.99


No comments: