Sunday, February 8, 2015

NDRD2015 :: Karnataka Varthe :: Officialವಿಪತ್ತು ನಿರ್ವಹಣೆ ಮಾಡುವವರಿಗೆ ಧೈರ್ಯ ಹಾಗೂ ಸಾಹಸ ಮನೋಭಾವ ಅಗತ್ಯ: ರಾಜ್ಯಪಾಲ ಶ್ರೀ ವಾಜುಬಾಯಿ ವಾಲ
ಬೆಂಗಳೂರು, ಫೆಬ್ರವರಿ 6 (ಕರ್ನಾಟಕ ವಾರ್ತೆ) : ಪ್ರಕೃತಿ ವಿಕೋಪಗಳ ಹಾನಿ ನಿರ್ವಹಣೆಯಲ್ಲಿ ತೊಡಗಿಕೊಳ್ಳುವವರು ಧೈರ್ಯ ಹಾಗೂ ಸಾಹಸ ಮನೋಭಾವ ಹೊಂದಿರುವುದು ಅಗತ್ಯ ಎಂದು ರಾಜ್ಯಪಾಲ ಶ್ರೀ ವಾಜುಬಾಯಿ ವಾಲ ಅವರು ಅಭಿಪ್ರಾಯಪಟ್ಟರು.
ಇಂದು ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಅಂಗವಾಗಿ ಗೃಹ ರಕ್ಷಕ, ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯ ಆಯೋಜಿಸಿದ್ದ ಸಮಾರಂಭವನ್ನು ತ್ರಿವರ್ಣ ಬಲೂನ್‍ಗಳನ್ನು ಆಗಸಕ್ಕೆ ಹಾರಿಬಿಟ್ಟು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ತೊಡಗುವ ಮಾನವ ಸಂಪನ್ಮೂಲ ರಾಷ್ಟ್ರಾದ್ಯಂತ ಉತ್ತಮ ಹೆಸರು ಗಳಿಸಿದೆ. ಕೇವಲ ಕರ್ನಾಟಕ ರಾಜ್ಯದಲ್ಲೇ ಅಲ್ಲ, ಭಾರತದ ಯಾವುದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಅಥವಾ ತುರ್ತು ಸಂದರ್ಭಗಳು ಎದುರಾದಲ್ಲಿ ಗೃಹ ಇಲಾಖೆ ಸಂಬಂಧಿತ ರಕ್ಷಣದಳ ಮುನ್ನುಗ್ಗಿ ಸೇವೆ ಸಲ್ಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಗೃಹ ಸಚಿವ ಶ್ರೀ ಕೆ.ಜೆ. ಜಾರ್ಜ್ ಅವರು ಮಾತನಾಡಿ ವಿಪತ್ತು ನಿರ್ವಹಣೆ ಕುರಿತು ಜನ ಸಾಮಾನ್ಯರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಇಲಾಖೆಯು ಹಮ್ಮಿಕೊಂಡಿರುವ ವಿಪತ್ತು ಕಡಿತ ದಿನಾಚರಣೆ ಮತ್ತು ರ್ಯಾಲಿ ಕಾರ್ಯಕ್ರಮವು ಮಹತ್ವದ್ದಾಗಿದೆ ಎಂದರು. ಬೃಹತ್ ಮಾನವ ಸಂಪನ್ಮೂಲವನ್ನು ನಿರೀಕ್ಷಿಸುವ ವಿಪತ್ತು ನಿರ್ವಹಣಾ ಕಾರ್ಯ ಯಶಸ್ವಿಯಾಗಲು ಗೃಹ ರಕ್ಷಣಾ, ಪೌರ ರಕ್ಷಣಾ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಮಾತ್ರವಲ್ಲದೆ ನಾಗರಿಕರ ಸಹಭಾಗಿತ್ವವೂ ಮುಖ್ಯ ಎಂದು ಅವರು ಹೇಳಿದರು.
ಸಮಾರಂಭದ ನಂತರ ಅಗ್ನಿ ದುರಂತ ಹಾಗೂ ಬಾಂಬ್ ಸ್ಪೋಟ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಸಮಾರಂಭದಲ್ಲಿ ಗೃಹ ರಕ್ಷಣಾದಳದ ಡಿ.ಜಿ.ಪಿ. ಶ್ರೀ ಓಂಪ್ರಕಾಶ್, ಗೃಹ ರಕ್ಷಣಾ ದಳ ಹಾಗೂ ಪೌರರಕ್ಷಣಾದಳದ ಎ.ಡಿ.ಜಿ.ಪಿ. ಶ್ರೀ ಹೆಚ್.ಎನ್. ಸತ್ಯನಾರಾಯಣರಾವ್ ಅವರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳು ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದರು.
Disaster management is essential for those who have the courage and spirit of adventure: Governor Mr vajubayi wala
Bangalore, Feb 6 (ii) in the management of natural disasters such as damage todagikolluvavaru need to have the courage and adventurous spirit, he said that the Governor, Mr vajubayi wala.
Today, the National Disaster Reduction Day as part of the Home Guard, civil defense, fire and emergency services in the event organized by the Directorate of Karnataka state, he inaugurated the tricolor balloons haribittu agasakke engage in disaster management, human resources, the country has earned a good name. Not just in the state of Karnataka, India, natural disasters or emergency circumstances arise in any area of the home department said the words in the ear that raksanadala rush to serve.
At the present Home Minister Shri KJ George said that disaster management is essential to create awareness about the common people felt, especially in children. In this regard, the Department of Disaster Reduction Day and Rally program hammikondiruva important, he said. Disaster management, human capital, which is expected to be a huge success in the home defense, civil defense and fire and emergency services personnel as well as civilians, he said that it was important partnerships.
After the ceremony, which was the fire and disaster management demonstration was given in the case of the bomb blast. At the home of the convoy dijipi Mr Om Prakash, Home Guards and pauraraksanadalada edijipi Mr. HN. Other senior officials who were present, including satyanarayanarav. The various school and college students as well as private organizations involved in volunteer.
http://karnatakavarthe.org/kn/state-news-06-02-2015/

No comments: