Sunday, February 8, 2015

kannadaprabha:: ಗೃಹರಕ್ಷಕ ದಳ ರಾಜ್ಯಕ್ಕೇ ಸೀಮಿತ ಆಗಿರಬಾರದು: ರಾಜ್ಯಪಾಲ ವಾಲಾ :07 Feb 2015



ಗೃಹರಕ್ಷಕ ದಳ ರಾಜ್ಯಕ್ಕೇ ಸೀಮಿತ ಆಗಿರಬಾರದು: ರಾಜ್ಯಪಾಲ ವಾಲಾ

ಬೆಂಗಳೂರು: ಸಾರ್ವಜನಿಕರ ರಕ್ಷಣೆ ನಿಟ್ಟಿನಲ್ಲಿ ಗೃಹರಕ್ಷಕ ದಳಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರಬಾರದು ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.
ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಗೃಹರಕ್ಷಕ ದಳ, ಪೌರರಕ್ಷಣೆ, ಅಗ್ನಿಶಾಮಕ ಸೇವೆ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯ ಆಯೋಜಿಸಿದ್ದ ರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆ ಮತ್ತು ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುರ್ತು ಸೇವಾ ಯೋಜನೆಗಳು ಕೇವಲ ರಾಜ್ಯಕ್ಕೆ ಸೀಮಿತವಾಗಬಾರದು. ದೇಶದ ಯಾವುದೇ ಮೂಲೆಯಲ್ಲಿ ಅವಘಡ ಸಂಭವಿಸಿದರೆ ನಾಗರಿಕರ ಸೇವೆ ಸಿದ್ಧರಬೇಕು.
ಅವಘಡಗಳಲ್ಲಿ ಸಾರ್ವಜನಿಕರನ್ನು ರಕ್ಷಿಸುವಂತಹ ಮಹತ್ ಕಾರ್ಯಕ್ಕೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ರಾಜ್ಯದ ಪೌರರಕ್ಷಣ ದಳಕ್ಕೆ ದೇಶದಲ್ಲಿ ಪ್ರಥಮ ಸ್ಥಾನ ಲಬಿsಸಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಯುವ ಜನಾಂಗ ಸಾರ್ವಜನಿಕರನ್ನು ರಕ್ಷಿಸುವ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಜನರ ಕಷ್ಟಕ್ಕೆ ಆಸರೆಯಾಗಬೇಕು. ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ ಸಾರ್ವಜಕನಿಕರ ಆಸ್ತಿಪಾಸ್ತಿ, ಜೀವ ರಕ್ಷಣೆಗೆ ಮುಂದಾಗಬೇಕು
ಎಂದರು.
ಕಾರ್ಯಕ್ರಮದ ಬಳಿಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಘಟಕಗಳು ಬಾಂಬ್ ಸ್ಪೋಟದಂತಹ ಅವಘಡ ಸಂಭವಿಸಿದಾಗ ಉಂಟಾಗುವ ಸನ್ನಿವೇಶಗಳ ಬಗ್ಗೆ ಅಣಕು ಪ್ರದರ್ಶನ ನಡೆಸಿದರು.  ಅಗ್ನಿಶಾಮಕ ದಳದ ವಾಹನಗಳ ಪರಿಚಯ, ಬೆಂಕಿ ನಂದಿಸುವ ವಿಧಾನ, ಯಂತ್ರೋಪಕರಣಗಳ ಬಗ್ಗೆ ಮಾಹಿತಿಗಳನ್ನು ಪ್ರದರ್ಶನ ಮೂಲಕ ತೋರಿಸಲಾಯಿತು. ಅಗ್ನಿಶಾಮಕ ದಳದಲ್ಲಿ ಬಳಸುವ ವಸ್ತುಗಳ ಕುರಿತು ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ, ಸಿಆರ್ ಪಿಎಫ್, ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ಪೌರರಕ್ಷಣ ದಳ, ಪೊಲೀಸ್ ಹಾಗೂ ಎನ್‍ಸಿಸಿ ಕೆಡೆಟ್‍ಗಳು ಭಾಗವಹಿಸಿದ್ದರು. ಗೃಹಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಮಹಾ ನಿರ್ದೇಶಕ  ಲಾಲ್ ರುಖುಂ ಪಚಾವೋ ಉಪಸ್ಥಿತರಿದ್ದರು.

http://www.kannadaprabha.com/district-news/national-disaster-reduction-day-rally/246347.html

Google Translate..
Home Guards and Civil Defence Should not be Restricted to STATE ALONE  Governor

In order to protect the public from the Home Guard regiments viarvala said the governor would not only be limited to the state of Karnataka.
Friday Kanteerava Stadium, Home Guards, pauraraksane, fire and emergency services organized by the Directorate of National Disaster Prevention Day and Rally in the program, he said. Should not be limited only to the state of emergency service plans. Actually happens in any corner of the country, the citizens of Service siddharabeku.
During Disaster Citizens themselves to a large number of young people involved in the operation of the public needs to be protected Mahat said.

KARNATAKA  STATE  CIVIL DEFENCE STANDS FIRST IN THE COUNTRY
The state of the country in the first place pauraraksana were proud of the fact that the state labi s siruvudu. Todagikollabeku young adults than in protecting the public. Supporting people to be at greater risk. The property of self-collected sarvajakanikara in any case, should consider the protection of life
He said.
After the program in the event of fire and emergency service units caused by a bomb dropped spotadantaha performed mock about the circumstances. The introduction of fire department vehicles, fire extinguisher system, shown by the display of information about the machine. The exhibition was organized by the material force of firefighters.
Program Home Guards, CR PF, firefighters and turtusevegalu, pauraraksana brigade, police and NCC cadets participated. Home Minister KJ George, Director General of Police Lal rukhum pacavo present.

No comments: