Monday, August 10, 2015

40th Aryabhata International Award to Chief Warden Mr PRS Chetan and Team 33 Mr Parisara Chandru 09Aug2015


#Whatsapp_Group_Updates







Team33 Mr Parisara Chandru  received Aryabhata International award on 9th August 2015




My much pleasure to inform you that i have been honoured with 40th ARYABHATA INTERNATIONAL AWARD" for meritorious service in Civil Defence. Award presented by Justice Rama Jois, Nadoja Dr.Mahesh Joshi and Retd. Police Commissioner Sri.JyotiprakashMirji.



ಬೆಂಗಳೂರು: ಮನುಷ್ಯನ ಜೀವನ ಸೀಮಿತವಾಗಿರಬಹುದು. ಆದರೆ, ತನ್ನ ಮಹತ್ಕಾರ್ಯಗಳ ಮೂಲಕ ಅವನು ಅಮರವಾಗಬೇಕು ಎಂದು ಮಾಜಿ ರಾಜ್ಯಸಭೆ ಮಾಜಿ ಸದಸ್ಯ ಎಂ. ರಾಮಾಜೋಯಿಸ್‌ ಹೇಳಿದರು.
ನಗರದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಆರ್ಯಭಟ ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ 40ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮನುಷ್ಯ ತನ್ನ ಜೀವನದಲ್ಲಿ ಪಿತೃಋಣ, ಋಷಿ ಋಣ, ಭಗವಂತನ ಋಣ ಮತ್ತು ಮನುಷ್ಯ ಋಣ ಎಂಬ ನಾಲ್ಕು ಋಣಗಳನ್ನು ತೀರಿಸಬೇಕಾಗುತ್ತದೆ. ಇದರಲ್ಲಿ ಮನುಷ್ಯ ಋಣ ಅತ್ಯಂತ ಶ್ರೇಷ್ಠವಾದದ್ದು. ಸಮಾಜದಲ್ಲಿ ಬೆಳೆದ ವ್ಯಕ್ತಿ, ಆ ಸಮಾಜಕ್ಕೆ ತನ್ನದೇ ಆದ ರೂಪದಲ್ಲಿ ಸೇವೆ ಮಾಡುವ ಮೂಲಕ ಋಣ ತೀರಿಸಬೇಕು. ಆ ಮೂಲಕ ಅಮರರಾಗಬೇಕು ಎಂದು ಸಲಹೆ ಮಾಡಿದರು.
ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್‌ ಜೋಶಿ ಮಾತನಾಡಿ, ಸಾಧನೆ ಎನ್ನುವುದು ಕಠಿಣ ಹಾದಿ. ಪ್ರಶಸ್ತಿಗಳು ಈ ಹಾದಿಯಲ್ಲಿ ಬರುವ ಮರಗಳಿದ್ದಂತೆ. ಸಾಧನೆಯ ಯಾತ್ರಿಕರು ಈ ಪ್ರಶಸ್ತಿಗಳು ಎಂಬ ಮರದಡಿ ಕೆಲಹೊತ್ತು ವಿಶ್ರಮಿಸಿ, ಮುಂದಿನ ಹಾದಿಗೆ ಪ್ರೇರಣೆ ಪಡೆಯುತ್ತಾರೆ ಎಂದರು.
ನಿವೃತ್ತ ಪೊಲೀಸ್‌ ಆಯುಕ್ತ ಬಿ.ಜಿ. ಜ್ಯೋತಿಪ್ರಕಾಶ್‌ ಮಿರ್ಜಿ ಉಪಸ್ಥಿತರಿದ್ದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್‌.ಎನ್‌.ರಾವ್‌ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಶಿಕ್ಷಣ, ಬ್ಯಾಂಕಿಂಗ್‌, ಕಾನೂನು, ಮಾಧ್ಯಮ, ಧಾರ್ಮಿಕ, ಕಲೆ, ಹೋಟೆಲ್‌, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Read more at http://www.udayavani.com/kannada/news/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/90108/40-%E0%B2%AE%E0%B2%82%E0%B2%A6%E0%B2%BF%E0%B2%97%E0%B3%86-%E0%B2%86%E0%B2%B0%E0%B3%8D%E0%B2%AF%E0%B2%AD%E0%B2%9F-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF#x7fzBvVFsOwwg5vs.99



No comments: